ಸಣ್ಣ ಕಥೆ

*ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ (ರಿ) ಮೈಸೂರು* ~~~~~~~~~~~~~~~~~~
 *ಮಕ್ಕಳ ಸಮಗ್ರ ವಿಕಾಸ ಶಿಕ್ಷಕರ ಸಮಿತಿ ವತಿಯಿಂದ* *ಹಮ್ಮಿಕೊಂಡಿರುವ*
🤝🤝🤝🤝🤝🤝🤝🤝🤝
 *ಚಿತ್ರ ನೋಡಿ ಕಥೆ ಕಟ್ಟೋಣ ಬಾರಾ* (ಮಕ್ಕಳ ನೀತಿ ಕಥೆಗಳು)
🙏🙏🙏🙏🙏🙏🙏🙏🙏🙏🙏

ಶೀರ್ಷಿಕೆ: ಪ್ರಾಣಿ ಪ್ರಿಯ ಮೋಹನ

ಒಂದೂರಿನಲ್ಲಿ ರಾಮಪ್ಪ ಮತ್ತು ನಿಂಗಮ್ಮ ದಂಪತಿಗಳು ವಾಸವಾಗಿದ್ದರು. ಅವರು ಬಡತನದಲ್ಲಿ ತಮ್ಮ ಜೀವನ ನಡೆಸುತ್ತಿದ್ದರು. ಅವರಿಗೆ ಮೋಹನನೆಂಬ ಮಗ ಇದ್ದ. ರಾಮಪ್ಪನು ತನ್ನ ಜೀವನ ನಿರ್ವಹಣೆಗಾಗಿ ಕತ್ತೆಗಳನ್ನು ಸಾಕಿದ್ದನು ಜೊತೆಗೆ ಮನೆ ಕಾಯಲು ಒಂದು ನಾಯಿ ಕೂಡ ಇತ್ತು. ಮೋಹನ ಒಬ್ಬನೇ ಇದ್ದುದರಿಂದ ಕತ್ತೆಗಳು ಹಾಗೂ ನಾಯಿಯ ಜೊತೆ ಆಟವಾಡುತ್ತ ಬೆಳೆದ. ಅವುಗಳಿಗೆ ಮೇವು,ತಿಂಡಿ ಕೊಡುತ್ತಿದ್ದನು. ಶಾಲೆ ರಜೆ ಇರುವ ಸಮಯದಲ್ಲಿ ಮೇಯಿಸಲು ಗದ್ದೆಗೆ ಹೋಗುತ್ತಿದ್ದನು. ಒಟ್ಟಾರೆ ಪ್ರಾಣಿಗಳು ಎಲ್ಲ ಸೇರಿ ಒಂದೇ ಕುಟುಂಬದ ತರಹ ಅನ್ಯೋನವಾಗಿದ್ದವು.
ಹೀಗೆ ಒಮ್ಮೆ ಹರಿಲಾಲ್ ಎಂಬ ವ್ಯಾಪಾರಿಯು ಮಾರ್ಗ ಮಧ್ಯೆ ಬರುತ್ತಿರುವಾಗ ಗದ್ದೆಯಲ್ಲಿ ಮೇಯುತಿದ್ದ ಕತ್ತೆಗಳನ್ನು ಕಂಡನು.ಅವುಗಳಲ್ಲಿ ದಷ್ಟಪುಷ್ಟವಾಗಿದ್ದ ಒಂದು ಕತ್ತೆ ಅವನಿಗೆ ಹಿಡಿಸಿತು. ಹರಿ ಲಾಲನು ಕತ್ತೆಯನ್ನು ಕೊಳ್ಳಲು ನಿರ್ಧರಿಸಿದನು. ಹಣದ ಅವಶ್ಯಕತೆ ಇದುದ್ದರಿಂದ ರಾಮಪ್ಪ ಮಾರಾಟ ಮಾಡಲು ಒಪ್ಪಿದನು. ಪ್ರೀತಿಯ ಕತ್ತೆಯನ್ನು ಮಾರಾಟ ಮಾಡಿದ ವಿಷಯವು ಮೋಹನನ ಕಿವಿಗೆ ಬಿದ್ದಿತ್ತು. ಎದ್ದೆನೋ ಬಿದ್ದೆನೋ ಎಂದು ಒಂದೇ ಉಸಿರಿನಲ್ಲಿ ಮನೆಗೆ ಬಂದ.,, ಅಷ್ಟೊತ್ತಿಗೆ ಆಗಲೇ ರಾಮಪ್ಪ ಆ ಕತ್ತೆಯನ್ನು ಹರಿಲಾಲಿನಿಗೆ ಒಪ್ಪಿಸಲು ತೆಗೆದುಕೊಂಡು ಹೋಗುತ್ತಿದ್ದನು. ಇದನ್ನು ವಿಚಾರಿಸಿದ ಮೋಹನ ಕಕ್ಕಾಬಿಕ್ಕಿಯಾಗಿ ದಿಕ್ಕು ತೋಚದೆ ತನ್ನ ಪ್ರೀತಿಯ ಕತ್ತೆಯನ್ನು ತಬ್ಬಿಕೊಂಡ.ಇದನ್ನು ಮಾರಲು ಬಿಡುವುದಿಲ್ಲ ಎಂದು ಹಠ ಹಿಡಿದ. ಊರಿನವರು ಆ ದೃಶ್ಯವನ್ನು ಕಣ್ಣಾರೆ ಕಂಡು ಮರುಕ ಪಟ್ಟರು. ಏನ್ ಮಾಡೋದು ಹಣದ ಅವಶ್ಯಕತೆ ಇದ್ದುದರಿಂದ ರಾಮಪ್ಪ ಕತ್ತೆಯನ್ನು ಮಾರಲು ಮುಂದಾಗುತ್ತಾನೆ.
ಹರಿಲಾಲನ್ನು ಆ ಕತ್ತೆಯನ್ನು ಒಯ್ದು ತನ್ನ ಮಗ ಮನು ಲಾಲ್ ಗೆ ಅದರ ಮೇಲೆ ಸವಾರಿ ಕಲಿಸುತ್ತಾನೆ. ಹರಿ ಲಾಲ್ ಮತ್ತು ಆತನ ಸ್ನೇಹಿತ ಇಬ್ಬರು ಸೇರಿ ಮನುಲಾಲ್ ಗೆ ಕತ್ತೆ ಮೇಲೆ ಕೂರಿಸಿ ಸವಾರಿ ಮಾಡಿಸುತ್ತಾ ಖುಷಿ ಪಡುತ್ತಾರೆ. ಮನುಲಾಲ್ ಕೂಡ ಮನಸ್ಸಿನಲ್ಲಿಯೇ ಹಿರಿ ಹಿರಿ ಹಿಗ್ಗುತ್ತಾನೆ.
ಇತ್ತ ಮೋಹನನು ಪ್ರೀತಿಯ ಕಥೆಯನ್ನು ಕಳೆದುಕೊಂಡು ದಿಗ್ಭಾಂತನಾಗಿ ದಿಕ್ಕು ತೋಚದೆ ತನ್ನ ಅಳಲನ್ನು ತನ್ನ ತಾಯಿಯ ಮುಂದೆ ತೋಡಿಕೊಂಡ. ಆ ಸಮಯದಲ್ಲಿ ತಾಯಿಯು ವಾಸ್ತವ ಸ್ಥಿತಿಯನ್ನು ಅರ್ಥೈಸಿದಳು. "ಮಗು ಆ ಕತ್ತೆ ಹೋದರೇನು ಇನ್ನು ಉಳಿದ ಕತ್ತೆಗಳು ಇವೆಯಲ್ಲ ಅವುಗಳ ಜೊತೆಗೆ ಖುಷಿಯಿಂದ ಇರು ",ಎಂದು ಸಮಾಧಾನದ ಉತ್ತರ ನೀಡಿದಳು. ತಂದೆ ತಾಯಿಯ ಹಾಗೂ ಮನೆಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಮೋಹನನು ತಾಯಿಯ ಮಾತಿಗೆ ಒಪ್ಪಿ,ಇನ್ನುಳಿದ ಕತ್ತೆ ಹಾಗೂ ನಾಯಿ ಜೊತೆ ಮೊದಲಿನಂತೆ ಇರ ತೊಡಗಿದನು.ಆದರೂ ತನ್ನ ಪ್ರೀತಿಯ ಕತ್ತೆ ಮತ್ತೆ ಮತ್ತೆ ನೆನಪಿಗೆ ಬರುತ್ತಿತ್ತು.

ನೀತಿ : ಪ್ರೀತಿ ಕುರುಡು. ಹುಟ್ಟುವುದು ಗೊತ್ತು ಸಾಯುವುದು ಗೊತ್ತಿಲ್ಲ 

ಪ್ರೀತಿಯಿಂದ ಎಲ್ಲವನ್ನು ಗೆಲ್ಲಬಹುದು


 ಮೂರ್ತಿ ಎಲ್
 ಸಂಗೀತ ಮತ್ತು ಗಾಯನ ಶಿಕ್ಷಕರ ಸಮಿತಿ

Comments